kic-banner
 
ನಮ್ಮ ಬಗ್ಗೆ:
 
ಕರ್ನಾಟಕ ಮಾಹಿತಿ ಆಯೋಗವನ್ನು ಕರ್ನಾಟಕ ಸಾರ್ಕಾರವು ತನ್ನ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ರಚಿಸಿದೆ. ಆಯೋಗದಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ರಾಮುಮಾಆ) ಹಾಗೂ 10 ಜನರನ್ನು ಮೀರದಂತೆ ರಾಜ್ಯ ಮಾಹಿತಿ ಆಯುಕ್ತರು (ರಾಮಾಆ) ಇರಬಹುದಾಗಿದ್ದು. ಇವರನ್ನು ರಾಜ್ಯಪಾಲರು ನೇಮಿಸುತ್ತಾರೆ.
 
ವಿಳಾಸ:
ಕರ್ನಾಟಕ ಮಾಹಿತಿ ಆಯೋಗ,
ಮಾಹಿತಿ ಸೌಧ, ದೇವರಾಜ್ ಅರಸ್ ರೋಡ್, ವಿಧಾನ ಸೌಧ ವೆಸ್ಟ್ ಗೇಟ್-2 ಮುಂಭಾಗ, ಬೆಂಗಳೂರು - 560001.
ದೂರವಾಣಿ ಸಂಖ್ಯೆ: 080-22371959.
ಪ್ಯ್ಕಾಸ್ಸ್ ಸಂಖ್ಯೆ: 22371660.
 
 
ಸಂಸ್ಥೆಯ ನಕ್ಷೆ:
 
 
ಅಧ್ಯಾಯ-5
ಪ್ರಕರಣ 18. ಮಾಹಿತಿ ಆಯೋಗದ ಅಧಿಕಾರಗಳು ಮತ್ತು ಕಾರ್ಯಗಳು:
 
1) ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಕೇಂದ್ರ ಮಾಹಿತಿ ಆಯೋಗ ಅಥವಾ ರಾಜ್ಯ ಮಾಹಿತಿ ಆಯೋಗ ಸಂದರ್ಭನುಸಾರ ಯಾವುದೇ ವ್ಯಕ್ತಿಯಿಂದ ಫಿರ್ಯಾದನ್ನು ಸ್ವೀಕರಿಸಿ, ವಿಚಾರಣೆ ಮಾಡುವುದು.
 
     a) ಈ ಅಧಿನಿಯಮದಡಿಯಲ್ಲಿ ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅಥವಾ ಸಂದರ್ಭನುಸಾರ, ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅಂಥ ಯಾರೇ ಅಧಿಕಾರಿಯನ್ನು ನಿಯೋಜಿಸಲಾಗಿಲ್ಲವೆಂಬ ಕಾರಣದಿಂದ ಅಥವಾ 19ನೇ ಪುಟ: 2/1 ಪ್ರಕರಣ (1) ನೇ ಉಪಪ್ರಕರಣದಲ್ಲಿ ನಿರ್ಧಿಷ್ಟಪಡಿಸಲಾದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಹಿರಿಯ ಅಧಿಕಾರಿಗೆ ಅಥವಾ ಕೇಂದ್ರ ಮಾಹಿತಿ ಆಯುಕ್ತ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯುಕ್ತನಿಗೆ ಅದನ್ನು ರವಾನಿಸುವುದಕ್ಕಾಗಿ ಈ ಅಧಿನಿಯಮದಡಿಯಲ್ಲಿ ಮಾಹಿತಿಗಾಗಿ ಸಲ್ಲಿಸಿದ ಆತನ ಅರ್ಜಿಯನ್ನು ಅಥವಾ ಅಪೀಲನ್ನು ಸ್ವೀಕರಿಸಲು ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಸಹಾಯಕ ಮಾಹಿತಿ ಅಧಿಕಾರಿಯು ನಿರಾಕರಿಸಿದನೆಂಬ ಕಾರಣದಿಂದ ಕೋರಿಕೆಯನ್ನು ಸಲ್ಲಿಸಲು ಸಾಧ್ಯವಾಗದಿರುವಂಥ;
 
      b) ಈ ಅಧಿನಿಯಮದಡಿಯಲ್ಲಿ ಕೋರಲಾದ ಯಾವುದೇ ಮಾಹಿತಿ ಪಡೆಯಲು ಅವಕಾಶವನ್ನು ನಿರಾಕರಿಸಲಾಗಿರುವಂಥ;
 
     c) ಮಾಹಿತಿಗಾಗಿ ಮಾಡಿಕೊಂಡ ಮನವಿಗೆ ಈ ಅಧಿನಿಯಮದಡಿಯಲ್ಲಿ ನಿರ್ಧಿಷ್ಟಪಡಿಸಲಾದ ಕಾಲಪರಿಮಿತಿಯೊಳಗೆ ಉತ್ತರ ದೊರೆಯದಿರುವಂಥ ಅಥವಾ ಮಾಹಿತಿಯನ್ನು ಒದಗಿಸಿಲ್ಲದಿರುವಂಥ;
 
     d) ಆತನು ಅನುಚಿತವೆಂದು ಪರಿಗಣಿಸುವ ಶುಲ್ಕದ ಮೊತ್ತವನ್ನು ಸಂದಾಯ ಮಾಡುವಂತೆ ಅಗತ್ಯಪಡಿಸಲಾಗಿರುವಂಥ;
 
     e) ಆತನಿಗೆ, ಈ ಅಧಿನಿಯಮದಡಿಯಲ್ಲಿ ಅಪೂರ್ಣ, ತಪ್ಪುದಾರಿಗೆ ಎಳೆಯುವ ಅಥವಾ ಸುಳ್ಳು ಮಾಹಿತಿಯನ್ನು ನೀಡಿದ್ದಾರೆಂದು ನಂಬುವಂಥ; ಮತ್ತು
 
     e) ಈ ಅಧಿನಿಯಮದಡಿಯಲ್ಲಿ ದಾಖಲೆಗಳಿಗಾಗಿ ಕೋರುವುದಕ್ಕೆ ಅಥವಾ ದಾಖಲೆಗಳನ್ನು ಪಡೆಯುವುದಕ್ಕೆ ಸಂಬಂಧಿಸಿದ ಯಾವುದೇ ಇತರ ವಿಷಯದ ಸಂಬಂಧದಲ್ಲಿ ಯಾರೇ ವ್ಯಕ್ತಿಯಿಂದ ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಫೀರ್ಯಾದನ್ನು ಸ್ವೀಕರಿಸಿ ವಿಚಾರಣೆ ನಡೆಸುವುದು ಕೇಂದ್ರ ಮಾಹಿತಿ ಆಯೋಗದ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗದ ಕರ್ತವ್ಯವಾಗಿರತಕ್ಕದ್ದು.
 
 
2) ) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದಕ್ಕೆ ಸೂಕ್ತ ಕಾರಣಗಳಿವೆಯೆಂದು ಮನಗಂಡರೆ, ಅದು ಆ ಸಂಬಂಧದಲ್ಲಿ ವಿಚಾರಣೆಯನ್ನು ಪ್ರಾರಂಭಿಸಬಹುದು.
 
3)ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ಈ ಪ್ರಕರಣದ ಅಡಿಯಲ್ಲಿ ಯಾವುದೇ ವಿಷಯದ ಬಗ್ಗೆ ವಿಚಾರಣೆಯನ್ನು ನಡೆಸುವಾಗ, ಈ ಮುಂದಿನ ವಿಷಯಗಳ ಸಂಬಂಧದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ (19808 56 ಅಡಿಯಲ್ಲಿ) ಅಡಿಯಲ್ಲಿ ಹೊಡಿದ ದಾವೆಯನ್ನು ಅಧಿವಿಚಾರಣೆ ಮಾಡುವಾಗ ಸಿವಿಲ್ ನ್ಯಾಯಾಲಯದಲ್ಲಿ ನಿಹಿತಗೊಳಿಸಲಾದಂತಹದೇ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ,
 
     a) ವ್ಯಕ್ತಿಗಳ ಹಾಜರಾತಿಗಾಗಿ ಸಮನ್ಸ್ ಮಾಡುವುದು ಮತ್ತು ಒತ್ತಾಯಿಸುವುದು ಹಾಗೂ ಪ್ರಮಾಣ ವಚನದ ಮೇಲೆ ಮೌಖಿಕ ಅಥವಾ ಲಿಖಿತ ಸಾಕ್ಷ್ಯವನ್ನು ನೀಡುವುದಕ್ಕೆ ಮತ್ತು ದಸ್ತಾವೇಜುಗಳು ಅಥವಾ ವಸ್ತುಗಳನ್ನು ಹಾಜರುಪಡಿಸುವುದಕ್ಕೆ ಅವರನ್ನು ಒತ್ತಾಯಿಸುವುದು,
 
     b) ದಸ್ತಾವೇಜುಗಳ ಶೋಧನೆ ಮತ್ತು ಪರಿಶೀಲನೆಯನ್ನು ಅಗತ್ಯ ಪಡಿಸುವುದು;
 
     c) ಅಫಿದಾವಿತ್ತಿನ ಮೇಲೆ ಸಾಕ್ಷ್ಯವನ್ನು ಸ್ವೀಕರಿಸುವುದ;
 
     d) ಯಾವುದೇ ನ್ಯಾಯಾಲಯ ಅಥವಾ ಕಛೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಗಳನ್ನು ಕಡ್ಡಾಯವಾಗಿ ಕೋರುವುದು,
 
     e) ಸಾಕ್ಷಿದಾರರ ಅಥವಾ ದಸ್ತಾವೇಜುಗಳ ಪರೀಕ್ಷೆಗಾಗಿ ಸಮನ್ಸ್ಗಳನ್ನು ಹೊರಡಿಸುವುದು;
 
     f) ಗೊತ್ತುಪಡಿಸಬಹುದಾದ ಯಾವುದೇ ಇತರ ವಿಷಯ.
 
4)ಸಂಸತ್ತಿನ, ಅಥವಾ ಸಂದರ್ಭನುಸಾರ, ರಾಜ್ಯ ವಿಧಾನ ಮಂಡಲದ ಯಾವುದೇ ಇತರ ಅಧಿನಿಯಮದಲ್ಲಿ ಅಸಂಗತವಾದುದು ಏನೇ ಇದ್ದರೂ, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದಭರ್ಾನುಸಾರ, ರಾಜ್ಯ ಮಾಹಿತಿ ಆಯೋಗವು, ಈ ಅಧಿನಿಯಮದಡಿಯಲ್ಲಿ ಯಾವುದೇ ದೂರನ್ನು ವಿಚಾರಣೆ ಮಾಡುವ ಅವಧಿಯಲ್ಲಿ ಈ ಅಧಿನಿಯಮವು ಅನ್ವಯಿಸುವ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಯಾವುದೇ ದಾಖಲೆಯನ್ನು ಪರೀಕ್ಷಿಸಬಹುದು ಮತ್ತು ಅಂಥ ದಾಖಲೆಯನ್ನು ಯಾವುದೇ ಕಾರಣಗಳ ಮೇಲೆ ಅದಕ್ಕೆ ದೊರೆಯದಂತೆ ತಡೆಹಿಡಿಯತಕ್ಕದ್ದಲ್ಲ.
 
ಪ್ರಕರಣ 19: ಅಪೀಲು:
 
(1)7ನೇ ಪ್ರಕರಣದ (1) ನೇ ಉಪ-ಪ್ರಕರಣದಲ್ಲಿ ಅಥವಾ (3) ನೇ ಉಪಪ್ರಕರಣದ (ಎ) ಖಂಡದಲ್ಲಿ ನಿಧರ್ಿಷ್ಟಪಡಿಸಲಾದ ಸಮಯದೊಳಗೆ ನಿರ್ಣಯವನ್ನು ಸ್ವೀಕರಿಸದಿರುವಂಥ ಅಥವಾ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿರ್ಣಯದಿಂದ ಬಾಧಿತನಾದಂಥ ಯಾರೇ ವ್ಯಕ್ತಿಯು, ಅಂಥ ಅವಧಿಯು ಮುಕ್ತಾಯಗೊಂಡಂದಿನಿಂದ ಅಥವಾ ನಿರ್ಣಯದಿಂದ ಸ್ವೀಕರಿಸಿದ ದಿನದಿಂದ ಮೂವತ್ತು ದಿನಗಳೊಳಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಹಿರಿಯ ದರ್ಜೆಯ ಅಧಿಕಾರಿಗೆ ಅಪೀಲು ಸಲ್ಲಿಸಬಹುದು:
 
ಪರಂತು, ಅಪೀಲುದಾರನು, ಸಕಾಲದಲ್ಲಿ ಅಪೀಲು ಸಲ್ಲಿಸಲು ಸಾಕಷ್ಟು ಕಾರಣದಿಂದ ಪ್ರತಿಬಂಧಿತನಾಗಿದ್ದಾನೆಂದು ಅಧಿಕಾರಿಗೆ ಮನದಟ್ಟಾದರೆ ಅಂಥ ಅಧಿಕಾರಿಯು ಮೂವತ್ತು ದಿನಗಳ ಅವಧಿ ಮುಗಿದ ತರುವಾಯ ಅಪೀಲನ್ನು ಸ್ವೀಕರಿಸಬಹುದು.
 
(2)ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ಒಬ್ಬ ರಾಜ್ಯ ಮಾಹಿತಿ ಅಧಿಕಾರಿಯು ಮೂರನೇ ಪಕ್ಷದಾರನ ಮಾಹಿತಿಯನ್ನು ಬಹಿರಂಗಪಡಿಸುವಂತೆ 11ನೇ ಪ್ರಕರಣದ ಮೇರೆಗೆ ಮಾಡಿದ ಆದೇಶದ ವಿರುದ್ದ ಅಪೀಲು ಸಲ್ಲಿಸಿದಲ್ಲಿ ಸಂಬಂಧಪಟ್ಟ ಮೂರನೇ ಪಕ್ಷದಾರನು ಆದೇಶದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಪೀಲು ಸಲ್ಲಿಸತಕ್ಕದ್ದು.
 
(3) (1)ನೇ ಉಪಪ್ರಕರಣದ ಮೇರೆಗಿನ ನಿರ್ಣಯದ ವಿರುದ್ದ ಸಲ್ಲಿಸುವ ಎರಡನೇ ಅಪೀಲನ್ನು, ಕೇಂದ್ರ ಮಾಹಿತಿ ಆಯೋಗ ಅಥವಾ ರಾಜ್ಯ ಮಾಹಿತಿ ಆಯೋಗವು ನಿರ್ಣಯವನ್ನು ಮಾಡಬೇಕಿದ್ದ ಅಥವಾ ವಾಸ್ತವವಾಗಿ ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು:
 
ಪರಂತು, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗಕ್ಕೆ ಅಪೀಲುದಾರನು ಸಕಾಲದಲ್ಲಿ ಅಪೀಲನ್ನು ಸಲ್ಲಿಸಲು ಯುಕ್ತ ಕಾರಣದಿಂದ ಪ್ರತಿಬಂಧಿತನಾಗಿದ್ದಾನೆಂದು ಮನದಟ್ಟಾದರೆ, ತೊಂಭತ್ತು ದಿನಗಳ ಅವಧಿಯು ಮುಗಿದ ತರುವಾಯ ಆ ಅಪೀಲನ್ನು ಸ್ವೀಕರಿಸಬಹುದು.
 
(4) ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಡಿದ ಯಾವ ನಿರ್ಣಯದ ವಿರುದ್ದ ಅಪೀಲು ಸಲ್ಲಿಸಲಾಗಿದೆಯೋ ಅದು ಮೂರನೆಯ ಪಕ್ಷದಾರನ ಮಾಹಿತಿಗೆ ಸಂಬಂಧಿಸಿದ್ದರೆ, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು ಮೂರನೆಯ ಪಕ್ಷದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ನೀಡತಕ್ಕದ್ದು.
 
(5) ಯಾವುದೇ ಅಪೀಲು ವ್ಯವಹರಣೆಗಳಲ್ಲಿ, ಕೋರಿಕೆಯ ನಿರಾಕರಣೆ ಸಮರ್ಥನೀಯವಾಗಿತ್ತು ಎಂಬುದನ್ನು ರುಜುವಾತುಪಡಿಸುವ ಹೊಣೆ, ಕೋರಿಕೆಯನ್ನು ನಿರಾಕರಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮೇಲೆ ಇರತಕ್ಕದ್ದು.
 
(6) (1)ನೇ ಉಪಪ್ರಕರಣದ ಅಡಿಯಲ್ಲಿ ಅಥವಾ (2)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಲಾದ ಅಪೀಲನ್ನು, ಅದನ್ನು ಸ್ವೀಕರಿಸದ ಮೂವತ್ತು ದಿನಗಳೊಳಗೆ ಅಥವಾ ಸಂದರ್ಭನುಸಾರ, ಅದನ್ನು ಸಲ್ಲಿಸಿದ ದಿನಾಂಕದಿಂದ ಒಟ್ಟು ನಲವತ್ತೈದು ದಿನಗಳನ್ನು ಮೀರದ ಹಾಗೆ ವಿಸ್ತರಿಸಿದ ಅವಧಿಯೊಳಗೆ ವಿಲೆ ಮಾಡಿ ಅದರ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸತಕ್ಕದ್ದು.
 
(7) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗದ ನಿರ್ಣಯಗಳು ಬಂಧಕವಾಗಿರತಕ್ಕದ್ದು.
 
(8) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ತನ್ನ ನಿರ್ಣಯದಲ್ಲಿ:- (ಎ) ಈ ಅಧಿನಿಯಮದ ಉಪಬಂಧಗಳನ್ನು ಪಾಲಿಸುವಂತೆ ಮಾಡಲು ಈ ಮುಂದಿನವುಗಳನ್ನು ಒಳಗೊಂಡಂತೆ ಅವಶ್ಯವಾಗಬಹುದಾದಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವ ಅಧಿಕಾರವನ್ನು ಹೊಂದಿರುತ್ತದೆ. (1) ನಿರ್ಧಿಷ್ಟ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವಂತೆ ಕೋರಿದರೆ ಆ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವುದು; (2) ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವುದು. (3) ಕೆಲವು ಮಾಹಿತಿಯನ್ನು ಅಥವಾ ಮಾಹಿತಿಯ ಪ್ರವರ್ಗಗಳನ್ನು ಪ್ರಕಟಿಸುವುದು, (4) ದಾಖಲೆಗಳ ನಿರ್ವಹಣೆ, ವ್ಯವಸ್ಥಾಪನೆ ಮತ್ತು ನಾಶಕ್ಕೆ ಸಂಬಂಧಿಸಿದಂತೆ ತಾನು ಅನುಸರಿಸುತ್ತಿರುವ ಪದ್ಧತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು; (5) ಮಾಹಿತಿ ಹಕ್ಕಿನ ಬಗ್ಗೆ ತನ್ನ ಅಧಿಕಾರಿಗಳಿಗೆ ತರಬೇತಿ ಅವಕಾಶವನ್ನು ಹೆಚ್ಚಿಸುವುದು; (6) 4ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ ಪ್ರಕಾರ ವಾರ್ಷಿಕ ವರದಿಯೊಂದನ್ನು ಅದಕ್ಕೆ ಒದಗಿಸುವುದು. (ಬಿ) ಯಾವುದೇ ನಷ್ಟ ಅಥವಾ ಇತರ ಹಾನಿಗಾಗಿ ಫೀರ್ಯಾದುದಾರನಿಗೆ ನಷ್ಟಪರಿಹಾರ ನೀಡುವಂತೆ ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವುದು; (ಸಿ) ಈ ಅಧಿನಿಯಮದ ಅಡಿಯಲ್ಲಿ ಉಪಬಂಧಿಸಲಾದ ಯಾವುದೇ ಒಂದು ದಂಡನೆಯನ್ನು ವಿಧಿಸುವುದು; (ಡಿ) ಅರ್ಜಿಯನ್ನು ತಿರಸ್ಕರಿಸುವುದು
 
(9) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ಫೀರ್ಯಾದುದಾರನಿಗೆ ಮತ್ತು ಸಾರ್ವಜನಿಕ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ಹಕ್ಕು ಸೇರಿದಂತೆ ತನ್ನ ನಿರ್ಣಯವನ್ನು ತಿಳಿಸತಕ್ಕದ್ದು.
 
(10) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು ನಿಯಮಿಸಬಹುದಾದಂಥ ಪ್ರಕ್ರಿಯೆಗನುಸಾರವಾಗಿ ಅಪೀಲಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದು.
 
ಪ್ರಕರಣ 20: ದಂಡನೆಗಳು
 
(1) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ ರಾಜ್ಯ ಮಾಹಿತಿ ಆಯೋಗವು ಯಾವುದೇ ದೂರು ಅಥವಾ ಕೋರಿಕೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು, ಯಾವುದೇ ಯುಕ್ತ ಕಾರಣವಿಲ್ಲದೆ ಮಾಹಿತಿ ಕೋರಿ ಸಲ್ಲಿಸಿದ ಅfðಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆಂದು ಅಥವಾ 7ನೇ ಪ್ರಕರಣದ (1)ನೇ ಉಪ ಪ್ರಕರಣದ ಅಡಿಯಲ್ಲಿ ನಿದಿಷ್ಟಪಡಿಸಿದ ಸಮಯದೊಳಗೆ ಮಾಹಿತಿಯನ್ನು ಒದಗಿಸಿಲ್ಲವೆಂದು ಅಬಿಪ್ರಾಯಪಟ್ಟಲ್ಲಿ, ಅಥವಾ ಮಾಹಿತಿಗಾಗಿ ಕೋರಿಕೆಯನ್ನು ದುರುದ್ದೇಶದಿಂದ ನಿರಾಕರಿಸಿದ್ದಾನೆಂದು ಅಥವಾ ಗೊತ್ತಿದ್ದೂ ಸರಿಯಲ್ಲದ, ಅಪೂರ್ಣ ಅಥವಾ ದಾರಿತಪ್ಪಿಸುವ ಮಾಹಿತಿಗಳನ್ನು ನೀಡಿದ್ದಾನೆಂದು ಅಥವಾ ಕೋರಿಕೆಯ ವಿಷಯವಾಗಿದ್ದ ಮಾಹಿತಿಯನ್ನು ನಾಶಪಡಿಸಿದ್ದಾನೆಂದು ಅಥವಾ ಮಾಹಿತಿ ಒದಗಿಸುವುದಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸಿದ್ದಾನೆಂದುಅಭಿಪ್ರಾಯಪಟ್ಟಲ್ಲಿ, ಅರ್ಜಿಯನ್ನು ಸ್ವೀಕರಿಸಿದ ದಿನದವರೆಗೆ ಅಥವಾ ಮಾಹಿತಿಯನ್ನು ಒದಗಿಸಿದ ದಿನದವರೆಗೆ ಪ್ರತಿದಿನಕ್ಕೆ ಎರಡುನೂರ ಐವತ್ತು ರೂಪಾಯಿಗಳ ಜುಲ್ಮಾನೆಯನ್ನು ವಿಧಿಸತಕ್ಕದ್ದು, ಆದರೆ, ಜುಲ್ಮಾನೆಯ ಒಟ್ಟು ಮೊತ್ತವು ಇಪ್ಪತ್ತೈದು ಸಾವಿರ ರೂ.ಗಳನ್ನು ಮೀರತಕ್ಕದ್ದಲ್ಲ:
 
ಪರಂತು, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಯಾವುದೇ ದಂಡನೆಯನ್ನು ವಿಧಿಸುವ ಮುನ್ನ ಅವನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ನೀಡತಕ್ಕದ್ದು.
 
ಮತ್ತೂ ಪರಂತು, ತಾನು ಸಮುಚಿತವಾಗಿ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದೇನೆಂದು ರುಜುವಾತುಪಡಿಸುವುದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೊಣೆಯಾಗಿರತಕ್ಕದ್ದು.
 
(2) ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ ರಾಜ್ಯ ಮಾಹಿತಿ ಆಯೋಗವು ಯಾವುದೇ ದೂರು ಅಥವಾ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದಭರ್ಾನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಯಾವುದೇ ಯುಕ್ತ ಕಾರಣವಿಲ್ಲದೆ ಹಾಗೂ ಸತತವಾಗಿ, ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ವಿಫಲನಾಗಿದ್ದಾನೆಂದು ಅಥವಾ 7ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ನಿರ್ಧಿಷ್ಟಪಡಿಸಿದ ಸಮಯದೊಳಗೆ ಮಾಹಿತಿ ನೀಡಿಲ್ಲವೆಂದು ಅಥವಾ ದುರುದ್ದೇಶದಿಂದ ಮಾಹಿತಿಯ ಕೋರಿಕೆಯನ್ನು ನಿರಾಕರಿಸಿದ್ದಾನೆಂದು ಅಥವಾ ಗೊತ್ತಿದ್ದೂ ಸರಿಯಲ್ಲದ, ಅಪೂರ್ಣ ಅಥವಾ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆಂದು ಅಥವಾ ಕೋರಿಕೆಯ ವಿಷಯವಾಗಿದ್ದ ಮಾಹಿತಿಯನ್ನು ನಾಶಪಡಿಸಿದ್ದಾನೆಂದು ಅಥವಾ ಮಾಹಿತಿ ಒದಗಿಸುವುದಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸಿದ್ದಾನೆಂದು ಅಭಿಪ್ರಾಯಪಟ್ಟರೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಅವನಿಗೆ ಅನ್ವಯವಾಗುವ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾತಡಕ್ಕದ್ದು.